ನಾರಾಯಣಘಟ್ಟ ಕ್ಷೇತ್ರದ ಸ್ಥಳ ಪುರಾಣ
ಆಧಿ
ನಾರಾಯಣಘಟ್ಟ ಕ್ಷೇತ್ರದ ಸ್ಥಳ
ಪುರಾಣ
ಒಂದು
ದಿನ ಶೌನಕಾದಿ ಮುನಿಗಳು
ಸೂತಪುರಾಣಿಕರನ್ನು ಸಮಸ್ತ ಪಾಪ
ಪರಿಹಾರ ಮತ್ತು ಕ್ಷಿಪ್ರ ಮೋಕ್ಷ
ಪ್ರದಾಯಕ್ಕೆ ಸಾದ್ಯವಾದ
ಪುಣ್ಯಕ್ಷೇತ್ರವೊಂದನ್ನು ತಿಳಿಯ
ಬಯಸಿದರು.
ಘಟ್ಟ
ತ್ರಯಗಳಲ್ಲಿ ನಾರಾಯಣಘಟ್ಟ -
ಆದಿಘಟ್ಟ,
ಬನ್ನೇರುಘಟ್ಟ
- ಮಧ್ಯಘಟ್ಟ, ಚುಂಚನಘಟ್ಟ
- ಅಂತ್ಯಘಟ್ಟವೆಂದು
ಪ್ರತೀತಿಯಿದೆ. ಕೃಷ್ಣೆ
ಕಾವೇರಿಯರ ಮಧ್ಯೆ ಧಕ್ಷಿಣ ಪಿನಾಕಿನಿ
ಸಮೀಪದಲ್ಲಿ ಚಂಪಕಾ ಕ್ಷೇತ್ರವೆಂಬುದೊಂದು
ಇದೆ. ಕಾಶಿಯಿಂದ
ದಕ್ಷಿಣಕ್ಕೆ ೩೦ ಯೋಜನೆಗಳ ದೂರದಲ್ಲಿ
ಗೋಕರ್ಣದ ಪೂರ್ವದಲ್ಲಿ ೬೦ ಯೋಜನೆಗಳ
ದೂರದಲ್ಲಿ ಧನುಶ್ಕೋಟಿಯಿಂದ
ಉತ್ತರಕ್ಕೆ ೬೦ ಯೋಜನೆಗಳ ದೂರದಲ್ಲಿ
ಈ ಕ್ಷೇತ್ರವಿದೆ. ಈ
ಕ್ಷೇತ್ರದ ದಕ್ಷಿಣದಲ್ಲಿ ಸಕಲ
ಪಾಪ ನಿವಾರಕವಾದ ಚಂಪಕಾನದಿ
ಪೂರ್ವಾಭಿಮುಖವಾಗಿ ಪ್ರವಹಿಸುತ್ತದೆ.
ಕೃತಯುಗ
ಹೀತ
ಪ್ರಹೀತ ಎಂಬ ರಾಕ್ಷಸ ವೀರರಿದ್ದರು.
ಪ್ರಹೀತೆಗೆ
ವಿದ್ಯುತ್ ಕೇಶಿನೆಂಬ ಮಗನು
ಹುಟ್ಟಿದನು. ಈ
ಮಾಲ್ಯವಂಶ ವಂಶದಲ್ಲಿ ಮಾಲಿ ಸುಮಾಲಿ
ಎಂಬ ರಾಕ್ಷಸರು ಹುಟ್ಟಿದರು.
ಬ್ರಹ್ಮ ದೇವರ
ವರದಿಂದ ಇವರು ಬಹಳ ಕೊಬ್ಬಿದವರಾಗಿ
ಬ್ರಾಹ್ಮಣರನ್ನು, ಮುನಿಗಳನ್ನು
ಹಿಂಸಿಸುತ್ತಾ ಯಜ್ಞಯಾಗಾದಿಗಳಿಗೆ
ತೊಂದರೆಯನ್ನು ಕೊಡುತ್ತಾ ಇದ್ದರು.
ತೊಂದರೆಗೊಳಗಾದ
ಋಷಿಗಳು ಶ್ರೀಮನ್ನಾರಾಯಣನ ಬಳಿ
ಮೊರೆಯಿಡಲು ಆ ಜಗದ್ರಕ್ಷಕನು
ಅವರಿಗೆಲ್ಲ ಅಭಯವನ್ನಿತ್ತು
ಕಳುಹಿಸಿದನು. ಇದನ್ನು
ತಿಳಿದ ಮಾಲ್ಯವಂತನು ತನ್ನ
ತಮ್ಮಂದಿರಿಗೆ ಆ ದೇವದೇವನಿಗೆ
ಶರಣು ಹೋಗೋಣವೆಂದು ಬುದ್ದಿ
ಹೇಳಿದನು. ಮೂಡ
ತಮ್ಮಂದಿರಾದ ಮಾಲಿ ಮತ್ತು ಸುಮಾಲಿಯರು
ಅದಕ್ಕೆ ಒಪ್ಪಲಿಲ್ಲ.
ಯುದ್ಧಸನ್ನದ್ಧರಾಗಿ
ದೇವತೆಗಳ ಮೇಲೆ ಯುದ್ಧಕ್ಕೆ
ಹೊರಟರು. ಈ
ರಕ್ಕಸರನ್ನೆದುರಿಸಲು ತಾನೇ ಶಂಖ
ಚಕ್ರ ಗಧಾದಾರಿಯಾಗಿ ಬಂದು ಆ
ರಕ್ಕಸದ್ವಯರನ್ನು ಸಂಹರಿಸಿದನು.
ಆಗ ಸಂತೋಷ
ಹೊಂದಿದ ಬೃಂದಾರಕಾದಿ ದೀವಮುನಿಗಳು
ಭಗವಂತನನ್ನು ವಿಧವಿಧವಾಗಿ
ಸ್ತುತಿಸಿ, ತಾವು
ಅರ್ಚಿಸಲನುವಾಗುವಂತೆ ಸುಗುಣಾಕಾರಣದ
ಮೂರ್ತಿಯಾಗಿ ಆವಿರ್ಭವಿಸಿ
ಅನುಗ್ರಹಿಸುವಂತೆ ಪ್ರಾರ್ಥಿಸಿಕೊಂಡರು.
ಭಕ್ತರಕ್ಷಕನಾದ
ಆ ಭಾಗವಂತನು ಅವರ ಪ್ರಾರ್ಥನೆಯನ್ನು
ಮನ್ನಿಸಿ ಚಂಪಕಾರಣ್ಯದಲ್ಲಿರುವ
ನಾರಾಯಣಕ್ಷೇತ್ರದಲ್ಲಿ ಸತಿ ಸಹಿತ
ಆವಿರ್ಭವಿಸುವೆನೆಂದೂ,
ನೀವೆಲ್ಲರೂ
ಭಜಿಸಿ ನಿಮ್ಮ ಮನೋಸಿದ್ದಿಗಳನ್ನು
ಹೊಂದಬಹುದೆಂದು ಅನುಗ್ರಹಿಸಿದನು.
ಕೃತಯುಗದಲ್ಲಿ
ಕೇಶವನೆಂತಲೂ, ತೇತ್ರಾಯುಗದಲ್ಲಿ
ರಾಮನೆಂತಲೂ, ದ್ವಾಪರಯುಗದಲ್ಲಿ
ವರದನೆಂತಲೂ, ಯುಗವೇದಗಳನುಸಾರವಾಗಿ
ಹೆಸರುಗಳನ್ನು ಧರಿಸುತ್ತೇನೆ ಎಂದು ಹೇಳಿದನು.
ದೇವತೆಗಳು ಆ
ವಾಕ್ಯಗಳನ್ನು ಕೇಳಿ ಸಂತೋಷ ಹೊಂದಿ
ನಾರಾಯಣಘಟ್ಟ ಕ್ಷೇತ್ರವನ್ನು
ಸೇರಿ ದೇವಶಿಲ್ಪಿಗಳಿಂದ ಉತ್ತಮವಾದ
ದೇವಾಲಯವನ್ನು ನಿರ್ಮಿಸಿ
ಪಾಂಚಾರಾತ್ರಾಗಮ ರೀತ್ಯ ಅರ್ಚಿಸಿದರು.
ತ್ರೇತಾಯುಗ
ತ್ರೇತಾಯುಗದಲ್ಲಿ
ಬ್ರಹ್ಮನವರಿಂದ ಮದೋನ್ಮತ್ತರಾಗಿ
ಸಜ್ಜನರನ್ನು ಹಿಂಸಿಸುತ್ತಿದ್ದ
ರಾವಣ ಕುಂಭಕರ್ಣರನ್ನು ಸಂಹರಿಸಲು
ಭಗವಂತನು ಶ್ರೀರಾಮಚಂದ್ರನಾಗಿ
ಅವತರಿಸಿದನು. ರಾವಣ
ಕುಂಭಕರ್ಣರನ್ನು ಸಂಹರಿಸಿದ
ಶ್ರೀರಾಮಚಂದ್ರನು ಜನಕಸುತೆಯೊಂದಿಗೆ
ಅಯೋಧ್ಯೆಗೆ ಹಿಂದಿರುಗುತ್ತಾ
ಮಾರ್ಗಮಧ್ಯದಲ್ಲಿ ಚಂಪಕಾರಣ್ಯದಲ್ಲಿರುವ
ಅಧಿನಾರಾಯಣಘಟ್ಟ ಕ್ಷೇತ್ರದಲ್ಲಿರುವ
ಶ್ರೀಮನ್ನಾರಾಯಣನ ಅರ್ಚಾವತಾರ
ಮೂರ್ತಿಯನ್ನು ಪೂಜಿಸಲು ಇಲ್ಲಿಗೆ
ಕುಂಭಸಂಭವನಾದ ಅಗಸ್ತ್ಯರು ಬಂದರು.
ಶ್ರೀರಾಮಚಂದ್ರನನ್ನು
ವಿಧವಿಧವಾಗಿ ಪ್ರಾರ್ಥಿಸುತ್ತ
ಕೃತಯುಗದಲ್ಲಿ ಕೇಶವನಾಗಿ
ಆವಿರ್ಭವಿಸಿದ ದೇವರು ನೀನೆ ಎಂದು
ಸ್ತೋತ್ರ ಮಾಡಿದರು. ಆಗ
ಶ್ರೀರಾಮಚಂದ್ರನು ಮುನಿಶ್ರೇಷ್ಠ
ಇಂದಿನಿಂದ ಈ ಕ್ಷೇತ್ರವು
ರಾಮಕ್ಷೇತ್ರವೆಂದಲೂ ನನ್ನ
ಅಂಶಗಳನ್ನೆಲ್ಲ ಸಂಪೂರಣವಾಗಿ
ಹೊಂದಿದ ಈ ಮೂರ್ತಿಯು ರಾಮಮೂರ್ತಿಯೆಂತಲೂ
ಹೆಸರಾಗಲಿ. ಇದೇ
ವೈಕುಂಠವು. ಇಲ್ಲಿ
ಪ್ರವಹಿಸುವ ಚಂಪಕಾನದಿಯೇ
ವಿರಜಾನದಿಯು. ಯಾರು
ಇಲ್ಲಿ ಈ ಮೂರ್ತಿಯನ್ನು ಆರಾಧಿಸುತ್ತಾರೋ
ಅವರಿಗೆ ಸಾಯುಜ್ಯ ಪ್ರಾಪ್ತಿಯಾಗುತ್ತೆಂದರು.
ಈ
ವೃತ್ತಾಂತವನ್ನು ಮುನಿಗಳಿಂದ
ತಿಳಿದು ಸದಾ ರಾಮ ತಾರಕವನ್ನು
ಜಪಿಸುವ ಭಗವಾನ್ ಶಂಕರನು ನಾರಾಯಣಘಟ್ಟ
ಕ್ಷೇತ್ರಕ್ಕೆ ಬಂದು ಇಲ್ಲಿನ
ಶ್ರೀರಾಮ ಮೂರ್ತಿಯನ್ನು ಅರ್ಚಿಸಿದನು.
ರಾಜರ್ಷಿಗಳೂ,
ಮಹರ್ಷಿಗಳೂ,
ಬ್ರಹ್ಮರ್ಷಿಗಳೂ
ಸಹ ಇಲ್ಲಿಗೆ ಬಂದು ಶ್ರೀರಾಮಮೂರ್ತಿಯನ್ನು
ಅರ್ಚಿಸಿ ಈ ಮೂರ್ತಿಯಿಂದ
ಅನುಗ್ರಹಿತರಾದರು.
ದ್ವಾಪರಯುಗ
ಈ
ಮಹಾಕ್ಷೇತ್ರದಲ್ಲಿ ನಾರಾಯಣ ಋಷಿ
ಎಂಬ ಮಹರ್ಷಿಗಳು ತಮ್ಮ ಶಿಷ್ಯರೊಡಗೂಡಿ ಶ್ರೀಮನ್ನಾರಾಯಣನನ್ನು ಪೂಜಿಸುತ್ತ
ಶಿಷ್ಯರಿಗೆ ಮೋಕ್ಷಸಾಧಕವಾದ
ಕರ್ಮಗಳನ್ನು ಭೋದಿಸುತ್ತಿರುವ
ಈ ಕಾಲದಲ್ಲಿ ಚಂಪಕಾ ಎಂಬ ಘೋರ
ರಕ್ಕಸಿಯೊಬ್ಬಳು ಈ ಕ್ಷೇತ್ರದಲ್ಲಿ
ಸಂಚರಿಸುತ್ತಾ ಮುನಿಪುಂಗವರನ್ನು
ಹಿಂಸಿಸುತ್ತಿದ್ದಳು.
ಇದನ್ನು ಕಂಡ
ನಾರಾಯಣ ಋಷಿಯು ಕೋಪದಿಂದ
ರಾಮಮಂತ್ರವನ್ನು ಅಭಿಮಂತ್ರಿಸಿ
ಪಾಷಾಣವೊಂದನ್ನೆಸೆಯಲು ಅದು ಆ
ರಕ್ಕಸಿಯ ಶಿರಸ್ಸನ್ನು ಕಡಿದುರುಳಿಸಿತು.
ಆನಂತರ ಆ
ಮುನಿಪುಂಗವರು ಭಗವಂತನನ್ನು
ವಿಧವಿಧವಾಗಿ ಸ್ತೋತ್ರಮಾಡಲು.
ಆಗ ಶ್ರೀಮನ್ನಾರಾಯಣನು
ಅವರನ್ನೆಲ್ಲ ಅನುಗ್ರಹಿಸುತ್ತ
ಚಂಪಕಾ ಎಂಬ ರಾಕ್ಷಸಿಯನ್ನು
ಸಂಹರಿಸಿದ್ದರಿಂದ ಈ ಅರಣ್ಯಕ್ಕೆ
ಚಂಪಕಾರಣ್ಯವೆಂದು ನಾರಾಯಣಘಟ್ಟ
ಕ್ಷೇತ್ರದ ಅರ್ಚಾಮೂರ್ತಿಗೆ
ಚಂಪಕಧಾಮನೆಂದು ಹೆಸರಾಗಲಿ ಎಂದು
ತನ್ನ ಬಿಂಬದಲ್ಲಿ ಐಕ್ಯನಾದನು.
ದ್ವಾಪರಯುಗದಲ್ಲಿ
ವಿಷ್ಣುಕರ್ಮನೆಂಬ ಕುಷ್ಠ ರೋಗ
ಪೀಡಿತನಾದ ಬ್ರಾಹ್ಮಣನು ಚಂದ್ರಲೇಖೆ
ಎಂಬ ರಾಜಕನ್ಯೆಯಲ್ಲಿ ಅನುರಕ್ತನಾದನು.
ಈ ಭಯಂಕರ ವ್ಯಾಧಿಗ್ರಸ್ಥನನ್ನು
ಆ ರಾಜಕನ್ಯೆ ಅಪಹಾಸ್ಯ ಮಾಡಿ
ತಿರಸ್ಕರಿಸಿದಳು. ತಿರಸ್ಕೃತನಾದ
ಆ ವಿಷ್ಣುಕರ್ಮನು ನಾರಾಯಣಕ್ಷೇತ್ರದಲ್ಲಿರುವ
ಚಂಪಕಧಾಮನನ್ನು ಆರಾಧಿಸಿ ಇಲ್ಲಿನ
ಸುವರ್ಣಮುಖಿ ತೀರ್ಥದಲ್ಲಿ
ಸ್ನಾನಮಾಡಲು ಅವನ ರೋಗವು ಮಾಯವಾಗಿ
ಮನ್ಮಥನಂತೆ ಸುಂದರ ರೂಪವನ್ನು
ಪಡೆದು ಆ ರಾಜಕನ್ಯೆಯನ್ನು
ವಿವಾಹವಾದನೆಂದು ಪ್ರತೀತಿ ಇದೆ.
ದ್ವಾಪರಯುಗದ
ಅಂತ್ಯಭಾಗದಲ್ಲಿ ಈ ನಾರಾಯಣಘಟ್ಟ
ಕ್ಷೇತ್ರಕ್ಕೆ ಅತಿ ಸಮೀಪದಲ್ಲಿರುವ
ಮೌಕ್ತಿಕಾಪುರಿ (ಈಗಿನ
ಮುತ್ತಾನಲ್ಲೂರು) ಎಂಬ
ಪಟ್ಟಣದಲ್ಲಿ ಸುಧನ್ವನೆಂಬ ರಾಜನು
ಬಹು ವೈಭವದಿಂದ ಇಂದ್ರಾದಿಗಳನ್ನು
ನಾಚಿಸುವ ರೀತಿಯಲ್ಲಿ ಆಳುತ್ತಿದ್ದನು.
ಕಾಲಕ್ರಮದಲ್ಲಿ
ತನ್ನ ಮಗನಾದ ಸುಧರ್ಮನು ಪ್ರಾಪ್ತ
ವಯಸ್ಕನಾಗಲು ಆತನಿಗೆ ಪಟ್ಟ ಕಟ್ಟಿ
ವಾನಪ್ರಸ್ಥಾಶ್ರಮವನ್ನು ಕೈಗೊಂಡು
ನಾರಾಯಣಘಟ್ಟ ಕ್ಷೇತ್ರವನ್ನು
ಸೇರಿ ಭಗವಂತನನ್ನು ಆರಾಧಿಸುತ್ತ
ಸಾಯುಜ್ಯವನ್ನು ಪಡೆದನು.
ಕಲಿಯುಗ
ಕಲಿಯುಗದ
ಆದಿಯಲ್ಲಿ ಸರ್ಪಯಾಗ ಮಾಡಿದ ಜನಮೇಜಯ
ರಾಜನು ಸರ್ಪಹತ್ಯಾದೋಷ ನಿವಾರಣೆಗಾಗಿ
ಪುಣ್ಯ ಕ್ಷೇತ್ರಗಳನ್ನು ದರ್ಶಿಸುತ್ತ
ಕಾವೇರಿ ತೀರದ ಚುಂಚನಕಟ್ಟೆಯಲ್ಲಿ
ಆವಿರ್ಭವಿಸಿರುವ ಶ್ರೀರಾಮ
ಮೂರ್ತಿಯನ್ನು ದರ್ಶಿಸಿ ಅರ್ಚಿಸಿದನು
ಅಲ್ಲಿಂದ ನಾರಾಯಣಘಟ್ಟ ಕ್ಷೇತ್ರಕ್ಕೆ
ಬಂದು ಇಲ್ಲಿನ ದೇವಾಲಯವು
ಶಿಥಿಲವಾಗಿರುವುದನ್ನು ಕಂಡು
ಇದನ್ನು ಜೀರ್ಣೋದ್ದಾರ ಮಾಡಿಸಿ
ಪಾಂಚರಾತ್ರಾಗಮರೀತ್ಯಾ ಅರ್ಚನೆಗಳು
ನಡೆಯುವಂತೆ ಏರ್ಪಡಿಸಿದನು.
ವಿಷ್ಣು
ದೇವಾಲಯಕ್ಕೆ ಹೊಂದಿಕೊಂಡಂತೆ
ಇರುವ ಶಿವ ದೇವಾಲಯವು ಚೋಳರ ಕಾಲದಲ್ಲಿ
ಕಟ್ಟಿರುತ್ತಾರೆ. ಈ
ಶ್ರೀರಾಮ ದೇವರು ಇಲ್ಲಿನ
ಸುತ್ತಮುತ್ತಲಿನ ಊರಿನಲ್ಲಿ
ವಾಸವಾಗಿರುವ ನೆರಾಟರೆಡ್ಡಿ
ಜನಾಂಗಕ್ಕೆ ಕುಲದೇವರಾಗಿದೆ.
ಕೃಪೆ: ಶ್ರೀ ಶ್ರೀನಿವಾಸ ಭಾಶ್ಯಾಂ, ಪ್ರಧಾನ ಅರ್ಚಕರು, ಶ್ರೀ ರಾಮ ದೇವಸ್ಥಾನ, ನಾರಾಯಣಘಟ್ಟ.
Comments