Posts

Showing posts from February 8, 2010

ಕರ್ನಾಟಕ ನಾಡಗೀತೆ

– ಕವಿ ರಾಷ್ಟ್ರಕವಿ ಕುವೆಂಪು ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಜೈ ಸುಂದರ ನದಿ ವನಗಳ ನಾಡೆ ಜಯ ಹೇ ರಸ ಋಷಿಗಳ ಬೀಡೆ ಭೂದೇವಿಯ ಮಕುಟದ ನವಮಣಿಯೆ ಗಂಧದ ಚಂದದ ಹೊನ್ನಿನ ಗಣಿಯೆ ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಜನನಿಯ ಜೋಗುಳ ವೇದದ ಘೋಷ ಜನನಿಗೆ ಜೀವವು ನಿನ್ನಾವೇಶ ಹಸುರಿನ ಗಿರಿಗಳ ಸಾಲೇ ನಿನ್ನಯ ಕೊರಳಿನ ಮಾಲೆ ಕಪಿಲ ಪತಂಜಲ ಗೌತಮ ಜಿನನುತ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ತೈಲಪ ಹೊಯ್ಸಳರಾಳಿದ ನಾಡೆ ಡಂಕಣ ಜಕಣರ ನೆಚ್ಚಿನ ಬೀಡೆ ಕೃಷ್ಣ ಶರಾವತಿ ತುಂಗಾ ಕಾವೇರಿಯ ವರ ರಂಗಾ ಚೈತನ್ಯ ಪರಮಹಂಸ ವಿವೇಕರ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಶಂಕರ ರಾಮಾನುಜ ವಿದ್ಯಾರಣ್ಯ ಬಸವೇಶ್ವರರಿಹ ದಿವ್ಯಾರಣ್ಯ ರನ್ನ ಷಡಕ್ಷರಿ ಪೊನ್ನ ಪಂಪ ಲಕುಮಿಪತಿ ಜನ್ನ ಕಬ್ಬಿಗರುದಿಸಿದ ಮಂಗಳ ಧಾಮ ಕವಿ ಕೋಗಿಲೆಗಳ ಪುಣ್ಯಾರಾಮ ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಸರ್ವಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ ಜನಕನ ಹೋಲುವ ದೊರೆಗಳ ಧಾಮ ಗಾಯಕ ವೈಣಿಕರಾರಾಮ ಕನ್ನಡ ನುಡಿ ಕುಣಿದಾಡುವ ದೇಹ ಕನ್ನಡ ತಾಯಿಯ ಮಕ್ಕಳ ಗೇಹ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ