Posts

Showing posts from May 26, 2017

ನಾರಾಯಣಘಟ್ಟ ಕ್ಷೇತ್ರದ ಸ್ಥಳ ಪುರಾಣ

Image
ಆಧಿ ನಾರಾಯಣಘಟ್ಟ ಕ್ಷೇತ್ರದ ಸ್ಥಳ ಪುರಾಣ ಶ್ರೀ ಭೂ - ನೀಲ ಸಮೇತ ಶ್ರೀ ಚಲುವ ಚಂಪಕ ವರದರಾಜ ಸ್ವಾಮಿ ಒಂದು ದಿನ ಶೌನಕಾದಿ ಮುನಿಗಳು ಸೂತಪುರಾಣಿಕರನ್ನು ಸಮಸ್ತ ಪಾಪ ಪರಿಹಾರ ಮತ್ತು ಕ್ಷಿಪ್ರ ಮೋಕ್ಷ ಪ್ರದಾಯಕ್ಕೆ ಸಾದ್ಯವಾದ ಪುಣ್ಯಕ್ಷೇತ್ರವೊಂದನ್ನು ತಿಳಿಯ ಬಯಸಿದರು . ಘಟ್ಟ ತ್ರಯಗಳಲ್ಲಿ ನಾರಾಯಣಘಟ್ಟ - ಆದಿಘಟ್ಟ , ಬನ್ನೇರುಘಟ್ಟ - ಮಧ್ಯಘಟ್ಟ , ಚುಂಚನಘಟ್ಟ - ಅಂತ್ಯಘಟ್ಟವೆಂದು ಪ್ರತೀತಿಯಿದೆ . ಕೃಷ್ಣೆ ಕಾವೇರಿಯರ ಮಧ್ಯೆ ಧಕ್ಷಿಣ ಪಿನಾಕಿನಿ ಸಮೀಪದಲ್ಲಿ ಚಂಪಕಾ ಕ್ಷೇತ್ರವೆಂಬುದೊಂದು ಇದೆ . ಕಾಶಿಯಿಂದ ದಕ್ಷಿಣಕ್ಕೆ ೩೦ ಯೋಜನೆಗಳ ದೂರದಲ್ಲಿ ಗೋಕರ್ಣದ ಪೂರ್ವದಲ್ಲಿ ೬೦ ಯೋಜನೆಗಳ ದೂರದಲ್ಲಿ ಧನುಶ್ಕೋಟಿಯಿಂದ ಉತ್ತರಕ್ಕೆ ೬೦ ಯೋಜನೆಗಳ ದೂರದಲ್ಲಿ ಈ ಕ್ಷೇತ್ರವಿದೆ . ಈ ಕ್ಷೇತ್ರದ ದಕ್ಷಿಣದಲ್ಲಿ ಸಕಲ ಪಾಪ ನಿವಾರಕವಾದ ಚಂಪಕಾನದಿ ಪೂರ್ವಾಭಿಮುಖವಾಗಿ ಪ್ರವಹಿಸುತ್ತದೆ . ಕೃತಯುಗ ಹೀತ ಪ್ರಹೀತ ಎಂಬ ರಾಕ್ಷಸ ವೀರರಿದ್ದರು . ಪ್ರಹೀತೆಗೆ ವಿದ್ಯುತ್ ಕೇಶಿನೆಂಬ ಮಗನು ಹುಟ್ಟಿದನು . ಈ ಮಾಲ್ಯವಂಶ ವಂಶದಲ್ಲಿ ಮಾಲಿ ಸುಮಾಲಿ ಎಂಬ ರಾಕ್ಷಸರು ಹುಟ್ಟಿದರು . ಬ್ರಹ್ಮ ದೇವರ ವರದಿಂದ ಇವರು ಬಹಳ ಕೊಬ್ಬಿದವರಾಗಿ ಬ್ರಾಹ್ಮಣರನ್ನು , ಮುನಿಗಳನ್ನು ಹಿಂಸಿಸುತ್ತಾ ಯಜ್ಞಯಾಗಾದಿಗಳಿಗೆ ತೊಂದರೆಯನ್ನು ಕೊಡುತ್ತಾ ಇದ್ದರು . ತೊಂದರೆಗೊಳಗಾದ ಋಷಿಗಳು ಶ್ರೀಮನ್ನಾರಾಯಣನ ಬಳಿ ಮೊರೆಯಿಡಲು ಆ ಜಗದ್ರಕ್ಷಕನು ಅವರಿಗೆಲ್ಲ ...