ನಮಸ್ಕಾರ
ಎಲ್ಲರಿಗೂ ನಮಸ್ಕಾರ. ನಾನು ಕಣ್ರೀ ಮುರಳಿ. ಇದೇ ಬೆಂಗಳೂರಿನ ಹೊರಭಾಗ ನಮ್ಮ ಊರು. ಏನ್ಮಾಡೋದು ನನ್ನ ಕತೇನ ಯಾರತ್ರನೂ ಹೇಳಿಕೊಳ್ಳೋಕೆ ಹಾಗ್ದೆ ಇಲ್ಲಿ ಗೀಚ್ತಾ ಇದ್ದೀನಿ. ನನ್ನ ಬಗ್ಗೆ ಹೇಳಬೇಕು ಅಂದ್ರೆ ನಾನು ತುಂಬಾ simple. ವಯಸ್ಸು 30. ನಾನು ಓದಿರೂದು ಡಿಪ್ಲೋಮಾ. ಒಂದು ಕಂಪನಿನನಲ್ಲಿ System Administrator ಆಗಿ ಕೆಲಸ ಮಾಡ್ತಾಇದ್ದೀನಿ. ಸಂಬ್ಳನೂ ಚೆನ್ನಾಗಿ ಬರ್ತಾ ಇದೇ. ನಮ್ಮ ಮನೇಲಿ ಇರೋವ್ರು ಅಂದ್ರೆ ಅಪ್ಪ, ಅಮ್ಮ, ನಾನು ಮತ್ತು ನನ್ನ ತಮ್ಮ ಅಷ್ಟೆ. ಅಪ್ಪ ರೈತ, ಅಮ್ಮ ಮನೆ ನೋಡ್ಕೋತಾರೆ, ತಮ್ಮ BPO ನಲ್ಲಿ ಕೆಲಸ ಮಾಡ್ತಾನೆ. ಇಷ್ಟೇ ನನ್ನ ಕುಟುಂಬ. ಊರಲ್ಲಿ ಸ್ವಲ್ಪ ಅಂದ್ರೆ ಒಂದು 5 ಎಕರೆ ಜಮೀನು ಇದೇ. ಅದ್ರಲ್ಲಿ ಮಳೆಗಾಲದಲ್ಲಿ ರಾಗಿ, ಅವ್ರೆಕಾಯಿ ಬೆಳಿತಿವಿ. ನನಗೆ ಸ್ನೇಹಿತರು ಅಂತ ಇರೋವ್ರು ಬರೀ Hai byeಗೆ ಅಷ್ಟೆ.. ನನ್ನತ್ರ ಏನಾದ್ರೂ ಕೆಲಸ ಹಾಗಬೇಕು ಅಂದ್ರೆ ಮಾತ್ರ ನನ್ನ ಹತ್ರ ಬರ್ತಾರೆ. ಇಲ್ಲ ಅಂದ್ರೆ ಯಾರು ನನ್ನ ಕಡೆ ತಲೆ ಹಾಕಿ ಕೂಡ ಮಲಗೋದಿಲ್ಲ. ನನಗೆ ಅನ್ನಿಸಿದಹಾಗೆ ಅವರು ಯಾಕೆ ನನ್ನನ್ನ avoid ಮಾಡುತಾರೆ ಅಂದ್ರೆ ನಾನು ತುಂಬಾ ಸಾದು ಪ್ರಾಣಿತಾರಾ ಇರ್ತೀನಿ. ಮಾತು ತುಂಬಾ ಕಡಿಮೆ. ಯಾವುದೇ ಕೆಟ್ಟ ಅಭ್ಯಾಸ ಇಲ್ಲ. ಅವುಗಳ ಜೊತೆಗೆ ಶುದ್ದ ಸಸ್ಯಾಹಾರಿ. ಇದ್ರಿಂದ ಅವ್ರಿಗೆ ತುಂಬಾ ಕಿರಿಕಿರಿ ಹಾಗ್ಬೋದು ಅಂತ ಕಾಣಿಸುತ್ತೆ. ಹೀಗಂತ ನನಗೆ ಅನಿಸ್ತಾ ಇದೇ ಅಷ್ಟೆ. ಇನ್ನು girl friends ವಿಚಾರಕ್ಕೆ ಬಂದ್ರೆ Hai ba...