ಶ್ರೀ ಭಗವದ್ಗೀತೆಯ ಸಂದೇಶ
ಆದುದೆಲ್ಲ ಒಳ್ಳೆಯದಕ್ಕಾಗಿ ಆಗುವುದೆಲ್ಲವು ಒಳ್ಳೆಯದಕ್ಕಾಗಿ ಇನ್ನು ಮುಂದೆ ಆಗುವುದು ಒಳ್ಳೆಯದಕ್ಕಾಗಿ ಕಳೆದುಕೊಂಡಿರುವುದನ್ನು ನೆನೆದು ದುಕ್ಕಿಸುವುದು ಏಕೆ? ಕಳೆದುಕೊಂಡಿರುವುದು ಯಾವುದಾದರು ನೀವು ತಂದಿರುವುದೋ? ನಾಶವಾದುದು ಯಾವುದಾದರು ನೀವು ಸೃಷ್ಟಿಸಿರುವುದೋ? ನೀವು ಪಡೆದುದೆಲ್ಲ ನಿಮಗೆ ಇಲ್ಲಿಂದಲೇ ದೊರೆತದ್ದು ನಿಮಗಿರುವುದೆಲ್ಲ ಇಲ್ಲಿಂದಲೇ ಪಡೆದಿರುವುದು ಇಂದು ನಿಮಗಿರುವುದೆಲ್ಲ ನೆನ್ನೆ ಬೇರೆ ಯಾರದೋ ಹಾಗಿತ್ತು ನಾಳೆ ಅದು ಮತ್ತೆ ಬೇರೆ ಯಾರದೋ ಹಾಗುವುದು ಪರಿವರ್ತನೆ ಪ್ರಕೃತಿ ನಿಯಮ.