Posts

Showing posts from January 7, 2008

ಜಯ ಭಾರತ ಜನನಿಯ ತನುಜಾತೆ |

ಜಯ ಭಾರತ ಜನನಿಯ ತನುಜಾತೆ | ಜಯ ಹೇ ಕರ್ನಾಟಕ ಮಾತೆ ಜಯ ಸುಂದರ ನದಿವನಗಳ ನಾಡೆ | ಜಯ ಹೇ ರಸಋಷಿಗಳ ಬೀಡೆ | ಭೂದೇವಿಯ ಮುಕುಟದ ನವ ಮಣಿಯೆ | ಗಂಧದ ಚಂದದ ಹೊನ್ನಿನ ಗಣಿಯೆ | ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ | ಜಯ ಹೇ ಕರ್ನಾಟಕ ಮಾತೆ ಜನನಿಯ ಜೋಗುಳ ವೇದದ ಘೋಷ | ಜನನಿಗೆ ಜೀವವು ನಿನ್ನಾವೇಶ | ಹಸುರಿನ ಗಿರಿಗಳ ಸಾಲೆ | ನಿನ್ನಯ ಕೊರಳಿನ ಮಾಲೆ | ಕಪಿಲ ಪತಂಜಲ ಗೌತಮ ಜಿನನುತ ಭಾರತ ಜನನಿಯ ತನುಜಾತೆ | ಜಯ ಹೇ ಕರ್ನಾಟಕ ಮಾತೆ ಶಂಕರ ರಾಮಾನುಜ ವಿದ್ಯಾರಣ್ಯ | ಬಸವೇಶ್ವರರಿಹ ದಿವ್ಯಾರಣ್ಯ | ರನ್ನ ಷಡಕ್ಷರಿ ಪೊನ್ನ | ಪಂಪ ಲಕುಮಿಪತಿ ಜನ್ನ | ಕಬ್ಬಿಗರುದಿಸಿದ ಮಂಗಳ ಧಾಮ | ಕವಿ ಕೋಗಿಲೆಗಳ ಪುಣ್ಯಾರಾಮ | ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ | ಜಯ ಹೇ ಕರ್ನಾಟಕ ಮಾತೆ ತೈಲಪ ಹೊಯ್ಸಳರಾಳಿದ ನಾಡೆ | ಡಂಕಣ ಜಕಣರ ನೆಚ್ಚಿನ ಬೇಡೆ | ಕೃಷ್ಣ ಶರಾವತಿ ತುಂಗಾ | ಕಾವೇರಿಯ ವರ ರಂಗಾ | ಚೈತನ್ಯ ಪರಮಹಂಸ ವಿವೇಕರ ಭಾರತ ಜನನಿಯ ತನುಜಾತೆ | ಜಯ ಹೇ ಕರ್ನಾಟಕ ಮಾತೆ ಸರ್ವಜನಾಂಗದ ಶಾಂತಿಯ ತೋಟ | ರಸಿಕರ ಕಂಗಳ ಸೆಳೆಯುವ ನೋಟ | ಹಿಂದೂ ಕ್ರೈಸ್ತ ಮುಸಲ್ಮಾನ | ಪಾರಸಿಕ ಜೈನರುದ್ಯಾನ | ಜನಕನ ಹೋಲುವ ದೊರೆಗಳ ಧಾಮ | ಗಾಯಕ ವೈಣಿಕರಾರಾಮ | ಕನ್ನಡ ನುಡಿ ಕುಣಿದಾಡುವ ದೇಹ | ಕನ್ನಡ ತಾಯಿಯ ಮಕ್ಕಳ ಗೇಹ | ಜಯ ಭಾರತ ಜನನಿಯ ತನುಜಾತೆ | ಜಯ ಹೇ ಕರ್ನಾಟಕ ಮಾತೆ

Ninnindale.... Milana

ಹೇ ಹೇ ಹೇ.. ಆಹಾಹ..ತನನಾನ ತನನಾನ ತನನಾನನ ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆಈ ಎದೆಯಲ್ಲಿ ಸಿಹಿಯಾದ ಕೋಲಾಹಲನನ್ನೆದುರಲ್ಲಿ ನೀ ಹೀಗೆ ಬಂದಾಗಲೆನಿನ್ನ ತುಟಿಯಲ್ಲಿ ನಗುವಾಗುವ ಹಂಬಲನಾ ನಿಂತಲ್ಲೇ ಹಾಡಾದೆ ನಿನ್ನಿಂದಲೇನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ ಇರುಳಲ್ಲಿ ಜ್ವರದಂತೆ ಕಾಡಿ ಈಗಹಾಯಾಗಿ ನಿಂತಿರುವೆ ಸರಿಯೇನು ?ಬೇಕಂತಲೇ ಮಾಡಿ ಏನೋ ಮೋಡಿಇನ್ನೆಲ್ಲೊ ನೋಡುವ ಪರಿಯೇನುಈ ಮಾಯೆಗೆ ಈ ಮರುಳಿಗೆನಿನ್ನಿಂದ ಕಳೆ ಬಂದಿದೆನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ ಹೇ ಹೇ ಹೇ.. ಆಹಾಹ..ತನನಾನ ತನನಾನ ತನನಾನನ ಹೋದಲ್ಲಿ ಬಂದಲ್ಲಿ ಎಲ್ಲ ನಿನ್ನಸೊಂಪಾದ ಚೆಲುವಿನ ಗುಣಗಾನಕೇದಗೆ ಗರಿಯಂತೆ ನಿನ್ನ ನೋಟನನಗೇನೋ ಅಂದಂತೆ ಅನುಮಾನಕಣ್ಣಿಂದಲೆ ಸದ್ದಿಲ್ಲದೆಮುದ್ದಾದ ಕರೆ ಬಂದಿದೆನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ ಈ ಎದೆಯಲ್ಲಿ ಸಿಹಿಯಾದ ಕೋಲಾಹಲನನ್ನೆದುರಲ್ಲಿ ನೀ ಹೀಗೆ ಬಂದಾಗಲೆನಿನ್ನ ತುಟಿಯಲ್ಲಿ ನಗುವಾಗುವ ಹಂಬಲನಾ ನಿಂತಲ್ಲೇ ಹಾಡಾದೆ ನಿನ್ನಿಂದಲೆನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ