ಬಾನಿಗೊಂದು ಎಲ್ಲೆ ಎಲ್ಲಿದೆ?
ಹೇ…….. ಬಾನಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆ ಇದೇ? ಏಕೆ ಕನಸು ಕಾಣುವೇ? ನಿಧಾನಿಸು ನಿಧಾನಿಸು ಬಾನಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆ ಇದೇ? ಏಕೆ ಕನಸು ಕಾಣುವೇ? ನಿಧಾನಿಸು ನಿಧಾನಿಸು ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೇ? ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೇ? ಅವನ ನಿ-ಯಮ ಮೀರಿ ಇಲ್ಲಿ ಏನು ಸಾಗದು ನಾವು ನೆನಸಿದಂತೆ ಬಾಳಲೇನು ನಡೆಯದು ವಿಷಾದವಾಗಲಿ ವಿನೋದವಾಗಲಿ ಅದೇನೆ ಆಗಲಿ ಅವನೆ ಕಾರಣ. ಬಾನಿಗೊಂದು ಎಲ್ಲೆ ಎಲ್ಲಿದೇ? ಹುಟ್ಟು ಸಾವು ಬಾಳಿನಲ್ಲಿ ಏರಡು ಕೊನೆಗಳು ಬಯಸಿದಾಗ ಕಾಣದಿರುವ ಎರಡು ಮುಖಗಳು ಹರುಷವೊಂದೆ ಯಾರಿಗುಂಟು ಹೇಳು ಜಗದಲಿ ಹೂವು ಮುಳ್ಳು ಏರಡು ಉಂಟು ಬಾಳ ಲತೆಯಲಿ ದುರಾಸೆಯೇತಕೆ? ನಿರಾಸೆಯೇತಕೆ? ಅದೇನೆ ಬಂದರು ಅವನ ಕಾಣಿಕೆ ಬಾನಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆ ಇದೇ? ಏಕೆ ಕನಸು ಕಾಣುವೇ? ನಿಧಾನಿಸು ನಿಧಾನಿಸು