ಕನ್ನಡದಲ್ಲಿ ಹನುಮಾನ್ ಚಾಲಿಸ


ಹನುಮಾನ್ ಚಾಲಿಸ

ಜಯ ಹನುಮಂತ ಹೇ ಜ್ಞಾನಿ ಗುಣವಂತ
ಜಯ ಕಪೀಶ ಜಯ ತ್ರಿಲೋಕ ಪ್ರಕಾಶ ||||

ರಾಮ ದೂತ ಅಗಣಿತ ಗುಣ ಧಾಮ
ಅಂಜನಾಪುತ್ರ ಪವನಸುತ ನಾಮ||||

ಮಹಾವೀರನೆ ವಿಕ್ರಮ ಬಲಶಾಲಿ
ಕುಮತಿ ನಿವಾರನೆ ಸಜ್ಜನ ಸಂಘೀ||||

ಕಾಂಚನ ಕಾಯ ವಜ್ರ ಶರೀರ
ರುಚಿರ ಕುಂಡಲ ಧರ ತೇಜೋ ರೂಪ||||

ದ್ವಜವಜ್ರಾಂಕಿತ ಹಸ್ತ ಸುಶೋಭ
ಮೌಂಜಿ ಧರ ಶುಭ ಯಜ್ನೌಪವೀಥ||||

ಓ ರುದ್ರಾಂಶನೆ ಪವನ ಕುಮಾರ
ತೇಜೋ ದೇಹ ಜಯ ಜಯ ವೀರ||||

ವಿದ್ಯಾವಂತ ಚತುರ ಗುಣಶಾಲಿ
ರಾಮಕಾರ್ಯ ಸಾಧಕ ಸುರ ಬಾಲ||||

ರಾಮಚರಿತ ಮಾನಸ ಮಹಾವೀರ
ರಾಮಲಕ್ಷ್ಮಣ ಸೀತಾ ಪ್ರಿಯ ಧೂತ||||

ಸೂಕ್ಷ್ಮ ರೂಪಧರ ಸೀತಾ ದುಃಖ ಹಾರಿ
ಲಂಕಾ ಭಯಂಕರ ರಾವಣ ವೈರಿ||||

ಭೀಮ ರೂಪಧರ ಅಸುರ ಸಂಹಾರ
ರಾಮದೂತ ಪವನಸುತ ವೀರ||೧೦||

ರಾಮಲಕ್ಷ್ಮಣ ಪ್ರಾಣ ದಾತ
ರಾಮಪ್ರಿಯ ಸಕ ಹೇ ಹನುಮಂತ||೧೧||

ರಘುಪತಿ ಪ್ರಿಯ ಹೇ ಗುಣ ಗಣ ಧಾಮಾ
ಭರತ ಸಮಾನ ಹಿತ ರಾಮನ ಧೂತ||೧೨||

ನಿನ್ನಯ ಕೀರ್ತಿಯನು ಶ್ರೀರಾಮನು ಪೊಗಡಿದ
ಆಲಿಂಗನದ ಪರಮಪದ ನೀಡಿದ||೧೩||

ಯಮ ಕುಬೆರಾದಿಶ ಪಾಲರು ಪೊಗಳೆ
ನಿನ್ನಯ ಕೀರ್ತಿಯು ಹೇ ಜಯ ವೀರ||೧೪||

ಬ್ರಹ್ಮಾದಿ ದೇವತೆಗಳು ಸನಕ ಸನಂದನರ
ನಾರದ ಮುನಿಗಳು ನಿನ್ನಯ ಪೊಗಳೆ||೧೫||

ಸುಗ್ರೀವನಿಗೆ ನೀನುಪಕರಿಸಿದೆ ವೀರ
ರಾಮ ಸಖ್ಯವ ನೀಡಿ ರಾಜ್ಯ ಕರುಣಿಸಿದೆ||೧೬||

ನಿನ್ನಯ ನಂಬಿದ ವಿಭೀಷಣ ಧನ್ಯ
ಲಂಕಾರಸನಾದ ನಿನ್ನಯ ದಯದಿ||೧೭||

ದಿನಕರ ಬಿಂಭವ ಫಲವೆಂದರಿತೋ
ಲೀಲೆಯ ಮುಟ್ಟಿದೆ ಹೇ ಹನುಮಂತ||೧೮||

ಶ್ರೀರಾಮ ಮುದ್ರಿಕೆಯ ಸೀತೆಗೆ ಇತ್ತೇ
ಸಾಗರವ ಲಿಂಘಿಸಿದೆ ಲೀಲೆಯಲಿ ನೀನು||೧೯||

ಈ ಜಗದ ಎಂತ ಕಷ್ಟ ಕಾರ್ಯವೂ ಕೂಡ
ನಿನ್ನ ಜಯದಲ್ಲಿ ಸುಲಭವಾಹುದೋ ವೀರ ||೨೦||

ರಾಮ ಪ್ರಿಯನೇ ಶ್ರೀ ರಘುಪತಿ ಸಖನೇ
ನಿನ್ನಪ್ಪಣೆ ಇಲ್ಲದೆ ಶ್ರೀ ರಾಮದರ್ಶನವಹುದೇ ||೨೧||

ನಿನ್ನ ಮೊರೆ ಹೋಗಲು ಸುಖ ಶಾಂತಿ ಬಹುದು
ಸರ್ವ ರಕ್ಷಕ ವೀರ ಪೊರೆ ನಮ್ಮ ತಂದೆ||೨೨||

ಅಮಿತ ವಿಕ್ರಮ ನೀನು ಅಮಿತ ತೇಜ
ನಿನ್ನ ತೇಜವು ಸಹಿಸಲಾರಿಗೂ ಸಲ್ಲ ||೨೩||

ನಿನ್ನ ಸ್ಮರಣೆ ಮಾಡೆ ಭೂತ ಪ್ರೇತಗಳು
ಓಡುವುದು ಭಯದಿಂದ ಹೇ ರಾಮ ಭಕ್ತ ||೨೪||

ನಿನ್ನ ನಾಮದಿ ಜಪದಿ ರೋಗ ಪರಿಹಾರ
ಗ್ರಹಪೀಡೆ ಭಯ ನಾಶ ಸರ್ವ ರಕ್ಷಕ||೨೫||

ನಿನ್ನ ನೆನೆದವರ ಸಂಕಷ್ಟ ಪರಿಹರಿಸಿ
ಮನಕೆ ನೆಮ್ಮದಿ ನೀಡು ಕರುಣಾಳು||೨೬||

ಶ್ರೀ ರಾಜಾರಾಮನ ಸಕಲ ಕಾರ್ಯಗಳನ್ನು
ನೀನೆ ಮಾಡಿದೆ ಧನ್ಯ ಧನ್ಯ ವೀರ||೨೭||

ನಿನ್ನ ನೆನೆದವರ ಮನದಾಸೆ ಪಲಿಸಲಿ
ಅಮಿತ ಫಲ ಸಿಗಲಿ ಯಶ ದೊರೆಯಲಿ||೨೮||

ನಾಲ್ಕು ಯುಗದಲಿ ಹೇ ವೀರ ನಿನ್ನ ಮಹಿಮೆ
ಜಗವೆಲ್ಲ ಪ್ರಸರಿಸಿದೆ ಜಯ ಶೂರ ಧೀರ||೨೯||

ಸಾದು ಸಜ್ಜನರ ಪೊರೆಯೋ ಹೇ ವೀರ
ಅಸುರ ನಾಶನೆ ವೀರ ಶ್ರೀ ರಾಮ ಸಖನೇ||೩೦||

ಅಷ್ಟಸಿದ್ದಿಯ ದಾತ ನವನಿಧಿಯ ದಾತರ
ಈ ಶಕ್ತಿಯನು ಇತ್ತಳಾ ಸೀತೆ||೩೧||

ರಾಮ ನಾಮದ ಮಹಿಮೆ ತಿಳಿದ ಹೇ ಧೀರ
ರಘುಪತಿಯ ದಾಸನೆ ಅಂತರಂಗದ ಭಕ್ತ||೩೨||

ನಿನ್ನ ಪೂಜಿಸಿ ರಾಮ ಮೋದ ಪೊಂದುವನು
ಜನ್ಮ ಜನ್ಮದ ದುಃಖ ಬೇಗ ಕಳೆದು||೩೩||

ಸಕಲ ಸಜ್ಜನರೆಲ್ಲ ತಮ್ಮಂತ್ಯ ಕಾಲದಲಿ
ಶ್ರೀ ರಾಮನ ಪಾದ ಪೊಂದುವರು ಭಕ್ತಿಯಲಿ ||೩೪||

ಅನ್ಯ ದೇವರ ಗೊಡವೆ ನಮಗೇಕೆ ಹೇ ಹನುಮ
ನಿನ್ನ ನಂಬಿದರೆ ನಾವು ಸಕಲ ಸುಖವು||೩೫||

ಸಂಕಷ್ಟ ಪರಿಹರಿಸಿ ಪೀಡೆಯ ಕಳೆದು
ಮಂಕುಬುದ್ದಿಯ ಕಳೆಯೋ ಪವನ ತನಯ||೩೬||

ಜಯ ಜಯ ಹನುಮಂತ ಹೇ ಜ್ಞಾನ ಗುಣವಂತ
ಕೃಪೆ ಮಾಡು ತ್ವರಿತದಲಿ ಗುರುದೇವ ಎಮಗೆ||೩೭||

ಈ ಸ್ತೋತ್ರವನ್ನು ನೂರೆಂಟು ಬಾರಿ ಪಠಿಸಿದರೆ
ಕ್ಲೇಶವು ತೊಲಗಿ ಬಹು ಸುಖವು ಒದಗುವುದು ||೩೮||

ಹನುಮಾನ್ ಚಾಲಿಸ ಪಠಿಸಿದರೆ
ಸರ್ವ ಸಿದ್ದಿಯು ಲಾಭ ಬಹುದು ಶಿವನಾಣೆ||೩೯||

ತುಳಸೀದಾಸರು ನಮ್ರಹರಿದಾಸರು
ಶ್ರೀ ಹರಿಯ ಹೃದಯದಲಿ ಪೊಂದಿದವರು||೪೦||

~ ಶ್ರೀ ರಾಮ ಚಂದ್ರಾರ್ಪಣ ಮಸ್ತು~
Tag: hanumaan chalisa in kannada, transalated,

Comments

Popular posts from this blog

Rama Rama Mukunda Madhava / ರಾಮ ರಾಮ ಮುಕುಂದ ಮಾಧವ

Dharani Mandala Madyadolage ಧರಣಿ ಮಂಡಲ ಮಧ್ಯದೊಳಗೆ