ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟ ದೇಶದೋಳಿರುವ ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು ಎಳೆಯ ಮಾವಿನ ಮರದ ಕೆಳಗೆ ಕೊಳಲನೂದುತ ಗೊಲ್ಲ ಗೌಡನು ಬಳಸಿ ನಿಂದ ತುರುಗಳನ್ನು ಬಳಿಗೆ ಕರೆದನು ಹರುಷದಿ ಗಂಗೆ ಬರೆ ಗೌರಿ ಬಾರೆ ತುಂಗಭದ್ರೆ ತಾಯಿ ಬಾರೆ ಪುಣ್ಯಕೋಟಿ ನೀನು ಬಾರೆ ಎಂದು ಗೊಲ್ಲನು ಕರೆದನು ಗೊಲ್ಲ ಕರೆದ ದನಿಯ ಕೇಳಿ ಎಲ್ಲ ಹಸುಗಳು ಬಂದು ನಿಂದು ಚೆಲ್ಲಿ ಸೂಸಿ ಹಾಲು ಕರೆಯಲು ಅಲ್ಲಿ ತುಂಬಿತು ಬಿಂದಿಗೆ ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು ಹಬ್ಬಿದ ಮಳೆ ಮಧ್ಯದೊಳಗೆ ಅರ್ಭುತಾನೆಂದೆಂಬ ವ್ಯಾಘ್ರನು ಅಬ್ಬರಿಸಿ ಹಸಿಹಸಿದು ಬೆಟ್ಟದ ಕಿಬ್ಬಿಯೊಳು ತಾನಿದ್ದನು ಮೊರೆದು ರೋಶದಿ ಗುಡುಗುತ ಹುಲಿ ಭೋರಿಡುತ ಚ್ಚಂಗನೆ ಜಿಗಿದು ನೆಗೆಯಲು ಚೆದರಿ ಹೋದವು ಹಸುಗಳು ಪುಣ್ಯಕೋಟಿ ಎಂಬ ಹಸುವು ತನ್ನ ಕಂದನ ನೆನೆದುಕೊಂಡು ಮುನ್ನ ಹಾಲನು ಕೊಡುವೆನೆನುತ ಚೆಂಡಾಡಿ ತ ಬರುತಿರೆ ಇಂದೆನಗೆ ಆಹಾರ ಸಿಕ್ಕಿತು ಎಂದು ಬೇಗನೆ ದುಶ್ಟ ವ್ಯಾಘ್ರನು ಬಂದು ಬಳಸಿ ಅಡ್ಡಗಟ್ಟಿ ನಿಂದನಾ ಹುಲಿರಾಯನು ಮೇಲೆ ಬಿದ್ದು ನಿನ್ನನೀಗಲೆ ಬೀಳಹೊಯ್ವೆನು ನಿನ್ನ ಹೊಟ್ಟೆಯ ಸೀಳಿಬಿಡುವೆನು ಎನುತ ಕೋಪದಿ ಖೂಳ ವ್ಯಾಘ್ರನು ಕೂಗಲು ಒಂದು ಬಿನ್ನಹ ಹುಲಿಯೇ ಕೇಳು ಕಂದನಿರುವನು ದೊಡ್ಡಿಯೊಳಗೆ ಒಂದು ನಿಮಿಷದಿ ಮೊಲೆಯ ಕೊಟ್ಟು ಬಂದು ಸೇರುವೆ ನ...
Comments